Wednesday, July 22, 2020

10 ಅಸೈನ್ಮೆಂಟ್ ಗಳು

ಶಿಕ್ಷಕರು ಮಾಡಬೇಕಾದ 10 ಅಸೈನ್ಮೆಂಟ್ ಗಳು
  1. ಪ್ರತಿ ಶಿಕ್ಷಕರು ತಾವು ಬೋಧಿಸುವ ತರಗತಿಗಳ ವಿಷಯಗಳ ಪರಿಕಲ್ಪನೆಗಳು ಮತ್ತು ವಿಷಯಗಳನ್ನು ಆಧರಿಸಿ ಮಕ್ಕಳ ಕಲಿಕೆಗೆ ನೆರವಾಗುವ ಆಡಿಯೋ ಮತ್ತು ವಿಡಿಯೋಗಳನ್ನು ಸಿದ್ದಪಡಿಸುವುದು
  2. ಪ್ರತಿ ಪಾಠಗಳಿಗೆ ಘಟಕ ಯೋಜನೆಗಳನ್ನು ಸಿದ್ದಪಡಿಸುವುದು
  3. ತಮ್ಮ ತರಗತಿಯ ಕನಿಷ್ಠ 3 ವಿದ್ಯಾರ್ಥಿಗಳನ್ನು ಪಾಲಕರನ್ನು, ಪ್ರತಿನಿತ್ಯ ದೂರವಾಣಿ ಮೂಲಕ ಸಂಪರ್ಕಿಸಿ ಕೋವಿಡ್ ಕುರಿತಂತೆ ತೆಗೆದುಕೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳು ಮತ್ತು ತಮ್ಮ ವಿಷಯದಲ್ಲಿ ಹೇಗೆ ರಜಾ ದಿನಗಳಲ್ಲಿ ಪ್ರಸಕ್ತ ವಿಷಯಗಳನ್ನು ಓದಬೇಕು ಮತ್ತು ಓದಿನಲ್ಲಿ ತೊಡಗಿಸಿಕೊಳ್ಳಬೇಕು ಮತ್ತು ಹಳೇಯ ಪಠ್ಯವಿಷಯಗಳು ಮುಂದಿನ ತರಗತಿಯ ಕಲಿಕೆಗೆ ಹೇಗೆ ನೆರವಾಗುತ್ತವೆ ಎಂಬುದನ್ನು ತಿಳಿಸಬೇಕು ಮತ್ತು ಸಂಭಾಷಣೆಯ ಸಂಕ್ಷಿಪ್ತ ವಿವರಗಳನ್ನು ಲಿಖಿತವಾಗಿ ಸಂರಕ್ಷಿಸಿಡಬೇಕು.
  4.  ತಮ್ಮ ಪಾಠ ಬೋಧನೆಗೆ ನೆರವಾಗಲ್ಲ ಕನಿಷ್ಠ ಹತ್ತು ಕಲಿಕೋಪಕರಣ ಮತ್ತು ಪಾಠೋಪಕರಣಗಳನ್ನು ಸಿದ್ದಪಡಿಸಿಕೊಳ್ಳುವುದು
  5. ಯೂ ಟ್ಯೂಬ್ ಅಥವಾ ಅಂತರ್ಜಾಲದಲ್ಲಿ ತಮ್ಮ ವಿಷಯಕ್ಕೆ ಸಂಬಂಧಿಸಿದಂತೆ ಕನಿಷ್ಠ 20 ವಿಡಿಯೋಗಳನ್ನು ನೋಡುವ ಮೂಲಕ ತಮ್ಮ  ಜ್ಞಾನವನ್ನು ಅಪಡೇಟ್ ಮಾಡಿಕಳ್ಳುವುದು.ಮತ್ತು ನೋಡಿದ ಜ್ಞಾನಾರ್ಜನೆಯ ವಿಡಿಯೋಗಳ ಕುರಿತ ಸಣ್ಣ ಟಿಪ್ಪಣಿಗಳನ್ನು ಮಾಡಿಟ್ಟುಕೊಳ್ಳುವುದು.ಇದಕ್ಕಾಗಿ ನೀವು ಶೈಕ್ಷಣಿಕ  AUDIO & VIDIO , MEGHASHALA ONLINE ,EPATHSHALA, KHAN ACADEMY, SHAGUN ONLINE JUNCTION ,MASSACHUSETTS INSTITUTE OF TECHNOLOGY (MIT) ,DIKSHA APP ETC ಬಳಸಲು ಸೂಚಿಸಿದೆ.
  6. ತಮ್ಮ ವಿಷಯಗಳ ಸಹದ್ಯೋಗಿಗಳೊಂದಿಗೆ ವಿಷಯಾಧಾರಿತವಾಗಿ ದೂರವಾಣಿ ಅಥವಾ ವಿಡಿಯೋ ಕಾಲ್ ಮೂಲಕ ಸಂಪರ್ಕಿಸಿ ತಮ್ಮ ಜ್ಞಾನವನ್ನು ಅಪಡೇಟ್ ಮಾಡಿಕೊಳ್ಳುವುದು. ಮತ್ತ ಚರ್ಚಿಸಿದ ವಿಷಯಗಳ ಕುರಿತ ಸಣ್ಣ ಟಿಪ್ಪಣಿಗಳನ್ನು ಮಾಡಿಟ್ಟುಕೊಳ್ಳುವುದು.
  7. ತಮ್ಮ ತಮ್ಮ ತರಗತಿಗಳ ವಿಷಯಗಳಲ್ಲಿ ಸೇತುಬಂಧ ಶಿಕ್ಷಣದ ಕುರಿತಾದ ಯೋನೆಯನ್ನು ಸಿದ್ದಪಡಿಸುವುದು ಮತ್ತು ಪ್ರತಿ ವಿಷಯಗಳ ಸಾಮರ್ಥ್ಯಗಳನ್ನು ಆಧರಿಸಿ ಪೂರ್ವ ಪರಿಕ್ಷೆಗಳ ಪ್ರಶ್ನೆ ಪತ್ರಿಕೆಗಳನ್ನು ಸಿದ್ದಪಡಿಸಿಕೊಳ್ಳುವುದು.
  8. ತಾವು ಬೋಧಿಸುವ ವಿಷಯಗಳ ಕುರಿತಾದ ರಸ ಪ್ರಶ್ನೆ (ಕ್ವಿಜ್) ಬ್ಯಾಂಕ್ ನ್ನು ಸಿದ್ದಪಡಿಸಿಕೊಳ್ಳುವುದು.
  9. ಮನೆಯಿಂದಲೇ ಕೆಲಸದಡಿಯಲ್ಲಿ ನೀವು ತಮ್ಮ ತಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳುವಲ್ಲಿ ಹೇಗೆ ಬಳಸಿಕೊಂಡಿರಿ ಎಂಬುದರ ಕುರಿತಂತೆ ಕನಿಷ್ಠ 400 ಪದಗಳ ಒಂದು ಲೇಖನ ಸಿದ್ದಪಡಿಸಿ.
  10. ಕೋವಿಡ್-19 ವೈರಸ್ ಸೋಂಕು ಹರಡುತ್ತಿರುವ ಈ ವಿಷಮ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆ ಉತ್ಕೃಷ್ಠಗೊಳಿಸುವಲ್ಲಿ ಅದರಲ್ಲೂ ಅವರು ಕಲಿಕೆ ಪ್ರಕ್ರಿಯೆಯಲ್ಲಿ ಸದಾ ತೊಡಗುವಂತೆ ಮಾಡಲು ತಮ್ಮ ಸಲಹೆ ಸೂಚನೆ ಮತ್ತು ಕಾರ್ಯತಂತ್ರಗಳನ್ನು ಪಟ್ಟಿ ಮಾಡಿ.
  11. ಶಿಕ್ಷಕರು ತಾವು ಸಿದ್ದಪಡಿಸಿದ ಮತ್ತು ನಿರ್ವಹಿಸಿದ ಎಲ್ಲಾ ಅಸೈನ್ಮೆಂಟ್ ಗಳನ್ನು ತಮ್ಮ ಶಾಲೆಯ ಹೆಸರಿನಲ್ಲಿ BLOG CREATE ಮಾಡಿ ಅದರಲ್ಲಿ ಎಲ್ಲಾ ಅಸೈನ್ಮೆಂಟ್ ಗಳನ್ನು UPLOAD ಮಾಡುವುದು.                                                                         ಆಯುಕ್ತರ ಆದೇಶದ ಮೇರೆಗೆ ಈ ವಿಷಯ ತಮ್ಮ ಶಾಲೆಯ ಎಲ್ಲಾ ಶಿಕಷಕರಿಗೆ ಇನ್ನೊಮ್ಮೆ ತಿಳಿಸುವುದು.ದಿನಾಂಕ 22/07/2020 ರ MICROSOFT TEAMS ನ ಸಭೆಯಲ್ಲಿ ಈ ಮೇಲಿನ ಎಲ್ಲಾ ವಿಷಯಗಳು ಉರ್ದು ಭಾಷೆಯಲ್ಲಿ ಸವಿವರವಾಗಿ ಚರ್ಚಿಸಲಾಗಿದೆ ಕಾರಣ ಅಸೈನ್ಮೆಂಟ್ ಗಳನ್ನು 31/07/2020 ರೊಳಗಾಗಿ UPLOAD ಮಾಡಲು ಈ ಮೂಲಕ ತಾಲೂಕಿನ ಎಲ್ಲಾ ಉರ್ದು ಶಾಲೆಯ ಮುಖ್ಯಗುರುಗಳಿಗೆ ತಿಳಿಸಿದೆ.                                                                                                                                                                                                                                                            ಉರ್ದು ಸಿ.ಆರ್.ಪಿ.ಶಹಾಪೂರ                                                                                                                                                                                                                                                                                                                                                                                                                                                              ಗೆ, ಮುಖ್ಯಗುರುಗಳಿಗೆ ಸೂಕ್ತ ಕ್ರಮಕ್ಕಾಗಿ

No comments:

Post a Comment

خوف نہیں صبر درکار ہے۔

 السلام علیکم دوستو  امید کہ خیریت سے ہونگے آج کل کیا یوں کہیں تو بےجا نہ ہوگا کہ تقریباً چودہ مہینوں سے ہم کرونا جیسی مہلک وبا سے نجات پانے...